ಇತ್ತೀಚೆಗೆ ‘ರಾಮ ರಾಮ ರೇ’ ಎಂಬ ಚಿತ್ರ ನಮ್ಮ ಸಿನಿಮಾ Theaterಗಳಿಗೆ ಬಂತು. ನನಗೇನೂ ಇದನ್ನು ನೋಡಬೇಕೆಂಬ ಹುಚ್ಚಿರಲಿಲ್ಲ. ಆದರೆ ಯಾವುದೋ ಒಂದು Tweetಅಲ್ಲಿ ಈ ಚಿತ್ರದ ಹಾಡಿನ ಒಂದು ವಿಡಿಯೋ ಲಿಂಕ್ ನೋಡಿದೆ . ‘ಕೇಳು ಕೃಷ್ಣ ‘ ಅನ್ನೋ ಹಾಡನ್ನ ಇವರು WhatsApp ಸ್ಕ್ರೀನ್ನಲ್ಲಿ ತೋರಿಸಿದ್ದರು. ಇದನ್ನು ನೋಡಿ ನನಗೆ ಬಹಳ ಸಂತೋಷವಾಯಿತು . ಹೀಗೆಯೇ ಬೇರೆ ಬೇರೆ ನಟರು ಇದನ್ನು ಹೊಗಳುತ್ತಿರುವ Tweetಗಳು ಕಂಡು ಬಂದವು.
‘ರಾಮ ರಾಮ ರೇ’, ‘ತಿಥಿ’ ಚಿತ್ರದ ತರಹ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರಲಿಲ್ಲ .’ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ತರಹ ಹೆಸರು ಮಾಡಿರುವ ನಟರೂ ಇರಲಿಲ್ಲ . ಹೆಚ್ಚು ಪ್ರಚಾರ ಮಾಡಲು ಹಣವೂ ಇರಲಿಲ್ಲ . ಏನಪ್ಪಾ ಇದು , ರಕ್ಷಿತ್ ಶೆಟ್ಟಿ ಅಂತಹ ನಟರೆಲ್ಲ ಇದನ್ನ ತುಂಬಾ ಹೊಗಳ್ತಾ ಇದಾರಲ್ಲ ಅಂತ ನನಗೆ ಈ ಚಿತ್ರದ ಬಗ್ಗೆ ಸ್ವಲ್ಪ ಕುತೂಹಲ ಉಂಟಾಯಿತು .ನೋಡೇ ಬಿಡೋಣ ಅಂತ ಮಾರತಹಳ್ಳಿಯಲ್ಲಿರುವ ಒಂದು ಚಿತ್ರ ಮಂದಿರಕ್ಕೆ ನನ್ನ ಸ್ನೇಹಿತನ ಜೊತೆ ಹೋದೆ.
ನೋಡಿದ ಮೇಲೆ ಇದರ ಬಗ್ಗೆ ಏನಾದರೂ ಬರೆಯಬೇಕು ಎಂದೆನಿಸಿತು .
ಒಂದು ಮನೆ ಕಟ್ಟುವ ಮುನ್ನ ಅದರ foundation ಗಟ್ಟಿಯಾಗಿ ಕಟ್ಟಬೇಕು . ಅದೇ ರೀತಿ , ಒಂದು ಚಿತ್ರಕ್ಕೂ ಒಂದು ಒಳ್ಳೆಯ ಕಥೆ ಇರಬೇಕು . ಅದಿಲ್ಲದಿದ್ದರೆ ಎಂತಹ ಸ್ಟಾರ್ ನಟ/ ನಟಿ ಇದ್ದರೂ , ಅದು ಕುಸಿದು ಬೀಳುತ್ತದೆ . ಆದರೆ, ಒಳ್ಳೆ ಕಥೆ ಇದ್ದರೆ , ಸ್ಟಾರ್ ಇಲ್ಲದಿದ್ದರೂ, ಒಳ್ಳೆಯ ನಟರಿಂದ ಆ ಚಿತ್ರವನ್ನು ಗೆಲ್ಲಿಸಬಹುದು. ದುಡ್ಡಿನ ಅಭಾವ ಇದ್ದ ಸೂತ್ರಧಾರನಿಗೆ ಇದು ಸರಿಯಾಗಿ ಮನವರಿಕೆಯಾಗಿದೆ ಎಂದೆನಿಸುತ್ತದೆ.
ದುಡ್ಡಿನ ಅಭಾವವೇ ಚಿತ್ರದ ನವೀನ ಶೈಲಿಗೆ ಕಾರಣವಾಗಬಹುದು ಎಂಬುದನ್ನ ಈ ನಿರ್ದೇಶಕ ತೋರಿಸಿದ್ದಾನೆ . ಬಾಡಿಗೆ ಹಾಗು ಸೆಟ್ ಖರ್ಚನ್ನು ತಪ್ಪಿಸಲು ಚಿತ್ರವನ್ನು ಹೆಚ್ಚು- ಕಮ್ಮಿ ನಡು ರಸ್ತೆಯಲ್ಲೇ ತೆಗೆದಿದ್ದಾನೆ . ಇದು ನನಗೂ ಗೊತ್ತಿರಲಿಲ್ಲ . ಇವರ facebook pageಅಲ್ಲಿ ಇದ್ದ ಯಾವದೋ videoದಲ್ಲಿ ನಿರ್ದೇಶಕನೇ ಹೇಳಿದ ಮಾತಿದು . ಇದು ಗೊತ್ತಿಲ್ಲದಿದ್ದರೆ , ಯಾರಾದರೂ ಇದನ್ನು ಕಲಾತ್ಮಕ ದ್ರಿಷ್ಟಿಯಿಂದ ರಸ್ತೆಯಲ್ಲಿ ತೆಗೆದಿದ್ದಾರೇನೋ ಎಂದು ಹೇಳುವ ಸಾಧ್ಯತೆಯೇ ಹೆಚ್ಚು.
ಸತ್ಯ ಪ್ರಕಾಶ್ ಭಗವದ್ ಗೀತೆಯನ್ನು ಆಳವಾಗಿ ಅರಿತುಕೊಂಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ . ಆದರೆ ಅದರ ಸಾರಾಂಶವನ್ನು ಆಡು ಭಾಷೆಯಲ್ಲಿ ಬಹಳ ಅದ್ಭುತವಾಗಿ ಚಿಕ್ಕ ಹಾಡಿನ ಮೂಲಕ ನಮಗೆ ತಲುಪಿಸಿದ್ದಾರೆ . ಭಗವದ್ ಗೀತೆಯ ಬಗ್ಗೆ ಗೊತ್ತಿರುವವರಿಗೆ ಈ ಹಾಡು ಬಹಳ ಆನಂದವನ್ನು ಕೊಡ್ಡುತ್ತದೆ. ಪುರಾಣಗಳಲ್ಲಿ ಇವರಿಗೆ ಬಹಳ ಆಸಕ್ತಿಯಿರಬಹುದು. ಅದಕ್ಕೇ ರಾಮಾಯಣದ ಸನ್ನಿವೇಶದಿಂದ ಶುರುವಾಗಿ , ಭಗವದ್ ಗೀತೆಯ ಸಾರಾಂಶದಿಂದ ಈ ಚಿತ್ರ ಕೊನೆಗೊಳ್ಳುತ್ತದೆ ಎಂಬುದು ನನ್ನ ಅಭಿಪ್ರಾಯ.
ನನಗೆ ಇನ್ನೊಂದು ವಿಷಯ ಬಹಳ ಖುಷಿ ತಂದಿತು .ಬೇರೆಯವರ ಸೋಲನ್ನು ನೋಡಿ ಖುಷಿ ಪಡುವ ಕಾಲದಲ್ಲಿ , ಬೇರೆಯವರ ಗೆಲುವನ್ನು ಬಯಸುವ ಮಂದಿ ಕಲಿಯುಗದಲ್ಲಿ ಬಹಳ ಕಡಿಮೆ. Publicity ಇಲ್ಲದೆ , ಪ್ರೇಕ್ಷಕರ ಕೊರತೆಯಿಂದ ಚಿತ್ರ ಸೋಲಿನ ಅಂಚಿನಲ್ಲಿದ್ದಾಗ , ನಮ್ಮ ಹೆಸರಾಂತ ಕನ್ನಡ ನಟರು ಈ ಚಿತ್ರವನ್ನು ನೋಡಿ , ಒಬ್ಬ ಹೊಸಬನಿಗೆ ಪ್ರೋತ್ಸಾಹಿಸಿದರು. ಈ ಚಿತ್ರವನ್ನು ಮೆಚ್ಚಿ ಎಲ್ಲರಿಗು ಇದನ್ನು ನೋಡಿ ಎಂದು ಸಲಹೆ ನೀಡಿದರು . ಇದರಿಂದ ಚಿತ್ರಕ್ಕೆ ಸಿಗಬೇಕಾದ ಪ್ರತಿಕ್ರಿಯೆ ಸಿಕ್ಕಿತು .
ಮೊದಲನೇ test / one day ಪಂದ್ಯದಲ್ಲೇ century ಹೊಡಿಯುವುದಕ್ಕೆ ಬಹಳ ಪ್ರತಿಭೆಯ ಇರಬೇಕು. ಜೊತೆಯಲ್ಲಿ ಸ್ವಲ್ಪ ಅದೃಷ್ಟವೂ ಬೇಕು. ಇವೆರೆಡೂ ಸೇರಿದರೆ ಸಫಲತೆ ಸಾಧ್ಯವಾಗುತ್ತದೆ .ಸತ್ಯ ಪ್ರಕಾಶ್ ಕನ್ನಡ ಚಿತ್ರ ರಂಗದ debut ನಲ್ಲೆ ಸೆಂಚುರಿ ಹೊಡೆದ ಆಟಗಾರನಾಗುವ ಸಾಧ್ಯತೆಗಳು ಇವೆ. ಇವರ ಚಿತ್ರಕ್ಕೆ ಅಂತಹ ಕಥೆ , ಪಾತ್ರಗಳು , ದೃಶ್ಯಗಳು ಹಾಗು ಸಂಗೀತದ ಶಕ್ತಿ ಇದೆ . ಜನರು ಇಂತಹ ಚಿತ್ರಕ್ಕೆ ಪ್ರೋತ್ಸಾಹ ಕೊಡುತ್ತಾರೋ ಇಲ್ಲವೋ ಎಂಬುದೇ ಒಂದು ಕುತೂಹಲಕಾರಿ ಪ್ರಶ್ನೆ ಎಂದರೆ ತಪ್ಪಿಲ್ಲ . ಇಲ್ಲಿಯವರೆಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಸಿಕ್ಕರೆ ಒಳ್ಳೆಯದು .